ಚಟುವಟಿಕೆ -10 ಶೈಕ್ಷಣಿಕ ಲೇಖನ. ವೃತ್ತಿ ನೈಪುಣ್ಯತೆ :ವೃತ್ತಿ ಜೀವನೋಪಾಯಕ್ಕಾದರೆ ಪ್ರವೃತ್ತಿ ಆತ್ಮತೃಪ್ತಿಗಾಗಿ. ಶಿಕ್ಷಕ ವೃತ್ತಿಯಲ್ಲಿ ಪ್ರವೃತ್ತಿಯು ವೃತ್ತಿ ಕೌಶಲ್ಯವಾಗಿ ನಿರ್ಮಾಣವಾಗುತ್ತದೆ. ಆಗಾಗ ನಡೆಯುವ ತರಬೇತಿ, ಕಾರ್ಯಾಗಾರ, ಸಮಾಲೋಚನೆ, ಸಂಕಿರಣಗಳು ನಮ್ಮನ್ನು ಬೋಧನೆಗೆ ಗಟ್ಟಿಗೊಳಿಸಿವೆ. ನವೀನ ಮಾಧ್ಯಮಗಳಿಂದ ವೃತ್ತಿ ತೊಡಕುಗಳು ಬಹುಪಾಲು ನಿವಾರಣೆ ಆಗುತ್ತಿವೆ. ನಮಗೆ ನಾವೇ ವಾಟ್ಸ್ಯಾಪ್ ಗುಂಪುಗಳ ಮೂಲಕ, ಬ್ಲಾಗ್, ಯು ಟೂಬ್, ವಿಕಿಪೀಡಿಯ ಗಳ ಸಹಾಯದಿಂದ ಬಹಳಷ್ಟು ಕಲಿತು ವೃತ್ತಿಯಲ್ಲೂ ಅಳವಡಿಸಿಕೊಂಡಿದ್ದೇವೆ. ಟಾಲ್ಫ್ ತರಬೇತಿ ನಂತರ ಕೋರೋಣ ಪರಿಣಾಮದ ವಿಷಮ ಸ್ಥಿತಿಯಲ್ಲಿ ಅಂತರವಲೋಕನೆಗೆ ಅವಕಾಶ ದೊರಕಿತು ನಮ್ಮ ಮನೆಯಲ್ಲಿದ್ದುಕೊಂಡು ಮೀಟ್ ಯಾಪ್, ಮೈಕ್ರೋ ಸಾಫ್ಟ್ ಮೀಟ್ ಗಳ ಮೂಲಕ ಮಕ್ಕಳನ್ನು ಹಾಗೂ ಸಹೋದ್ಯೋಗಿಗಳನ್ನು ತಲುಪಲು ಮಾಧ್ಯಮ ನೆರವಾಯಿತು. ಆದರೂ ತರಗತಿ ವಾತಾವರಣ ಯಲ್ಲರೊಂನಳಗೊಂಡ ಕಲಿಕೆ ಸಿಗುತ್ತಿಲ್ಲ ಯಂಬ ಕೊರಗಿನಲ್ಲಿ ಕಾಲ ಕಳೆದೆವು ಇನ್ನೆಷ್ಟು ದಿನ ಹೀಗೆ ಮನೆಯಲ್ಲಿದ್ದು ಸರ್ಕಾರದ ಸಂಬಳ ಉಂಬುವದು ಬೇಗ ತೊಲಗಲಿ ಕೋರೋಣ ಮಾರಿ. ಗುಡಿಗಳ ಗಂಟೆ ಬಾರಿಸಿತು ಶಾಲೆಯ ಗಂಟೆಗಳು ಬಾರಿಸಲಿ. ಪವಿತ್ರ ವೃತ್ತಿ ನಮ್ಮದು ಹಾಗೆಂದು ಉಳಿದ ವೃತ್ತಿಗಳು ಅಪವಿತ್ರ ಎಂದಲ್ಲ. ಹಲವು ವೃತ್ತಿಗಾರರ ಮಕ್ಕಳು ವಿದ್ಯಾರ್ಜನೆಗೆಂದು ಪುಟ್ಟ ಸಮಾಜದಂತಿರುವ ತರಗತಿಗೆ ಬರುತ್ತಾರೆ. ಆಸೆಕಂಗಳಿಂದ ಬರುವ ಮಕ್ಕಳ ಕನಸುಗಳಿಗೆ ರೆಕ್ಕೆ ಹಚ್ಚಲು ಶಿಕ್ಷಕರ ಸೃಜನಶೀಲ ವರ್ತನೆ ನೆರವಾಗುವದು ವೃತ್ತಿ ಲೋಕವನ್ನು ಪ್ರವೇಶಿಸುವ ನಾವು ಸುತ್ತಲಿನ ಅನುಭವಗಳ ಸೋಸಿ ಸಂದರ್ಭಕ್ಕೆ ತಕ್ಕಂತೆ ಸಂಭಂದೀಕರಿಸುವದು ಅನುಭಾವಿ ಗುರುವಿಗೆ ಮಾತ್ರ ಸಾಧ್ಯ ಹಾಗಾಗಿ ವೃತ್ತಿಯನ್ನು ಪೂಜಿಸುವ, ಆನಂದಿಸುವ, ಬೆಳೆಸುವ ಕೃಷಿ ನಮ್ಮದಾಗಲಿ. ಸರಕಾರ ಕೊಡುವ ಸಂಭಾವನೆ ಬೆಟ್ಟದಷ್ಟು ಆದರೆ ನಮ್ಮ ಕೊಡುಗೆ ಅತ್ಯಲ್ಪ . ವೃತ್ತಿ ಕೌಶಲ್ಯ ಬೆಳೆಸಿಕೊಳ್ಳಲು B,ed., D, ed ಗಳು ಪರವಾನಿಗೆ ನೀಡಿದರೆ ! ಸೇವೆಗೆ ಸೇರಿದಂದಿನಿಂದ ಇಂದಿನವರೆಗೆ ನಾವು ಎಷ್ಟು ಅಪ್ಗ್ರೇಡ್ ಆಗಿದ್ದೇವೆ, ತರಗತಿ ಮತ್ತು ಶಾಲೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಮ್ಮ ಪಾತ್ರ, ಜವಾಬ್ದಾರಿ ಹೊತ್ತ ರೀತಿ, ಸಹೋದ್ಯೋಗಿಗಳೊಂದಿಗೆ ಸರ್ವ ಸಮ ದ್ರಷ್ಟಿ, ಜ್ಞಾನದ ಹಸಿವು, ದೇಶಭಕ್ತಿ, ಭಾವೈಕ್ಯತೆ ಮುಂತಾದ ಅಂಶಗಳನ್ನು ಹೇಗೆ ಅಂಗೀಕರಿಸಿದ್ದೇವೆ ಎಂದು ನಮಗೆ ನಾವೇ ಸಿಂಹಾವಲೋಕನ ಮಾಡಿಕೊಂಡಾಗ ವೃತ್ತಿ ನೈಪುಣ್ಯತೆಯ ಕಿರು ಚಿತ್ರಣಗಳು ಮನೋ ಪರದೆಯ ಮೇಲೆ ಹಾಯ್ದು ಹೋಗುತ್ತವೆ. ಒಬ್ಬ ವಿದ್ಯಾರ್ಥಿಯನ್ನು ನನ್ನ ಹೆಮ್ಮೆಯ ವಿದ್ಯಾರ್ಥಿ ಎಂದು ಗುರುತಿಸುವಾಗ ಆಗುವ ಆನಂದ, ಆತ ನನ್ನ ಹೆಮ್ಮೆಯ ಗುರುವೆಂದು ಗುರುತಿಸಿಕೊಳ್ಳುವದಕ್ಕಿಂತ ಮಿಗಿಲಾದುದುದು. ನಿವೃತ್ತಿಯ ಅಂಚಿಗೆ ಬಂದು ನಿಂತಾಗ ವೃತ್ತಿ ನೈಪುಣ್ಯತೆಯ ಹದವರಿತ ಹಂತ. ನಿವೃತ್ತಿಯ ನಂತರವೂ ನಾವು ತರಗತಿಗೆ ತೆರಳಿ ಪ್ರತಿಫಲಾಪೇಕ್ಷೆ ಇಲ್ಲದೆ ಪಾಠ ಮಾಡಿದರೆ ಅದು ನನ್ನ ದೃಷ್ಟಿಯಲ್ಲಿ ನೈಜ ವೃತ್ತಿ ಧರ್ಮ. ನಮ್ಮ ಕರ್ಮ ಬೋಧನೆಯಾದರೆ, ವೃತ್ತಿ ಧರ್ಮವಾಗಬೇಕು. ನಿಪುಣತೆಯ ಹಂತ ತಲುಪಿ ಕಿರಿಯ ಸಹೋದ್ಯೋಗಿಗಳ್ನು ನಿಪುಣರನ್ನಾಗಿ ಮಾಡುವಲ್ಲಿ ವೃತ್ತಿ ನೈಪುಣ್ಯತೆಯ ಮರ್ಮ ಅಡಗಿದೆ. ಗುರು ದ್ರೋಣರ ಗುರು ಪರಂಪರೆಯನ್ನು ಬೆಳೆಸುತ್ತ, ಕೃಷ್ಣ ವಾಸುದೇವರ ಧರ್ಮದೃಷ್ಟಿ ಅರಿತು ಗಣಕ ಯುಗದ ಶಿಷ್ಯ ಪೀಳಿಗೆ ಮುನ್ನಡೆಸೋಣ. ಗುರವೇ ನಮಃ

Comments

  1. ಔದು ಸರ್. ಮಕ್ಕಳನ್ನು ಓದಿನ ಕಡೆಗೆ ಕೊಂಡೊಯುವದು ಅತ್ಯಂತ ಅವಶ್ಯಕ ವಾದ ಜವಾಬ್ದಾರಿ ನಮ್ಮೆಲ್ಲ ಶಿಕ್ಷೆಕರಿಗೆ ಇದೆ..ನಾವು ಶಾಲಾ ಕೋಣೆ ಗಳಲ್ಲಿ ಮಕ್ಕಳೊಂದಿಗೆ ಯಾವಾಗ ಪಾಠ ಮಾಡುವದೆಂದು ಎಂದು ಬೇಜಾರಾಗುತ್ತಿದೆ ಸರ್..ಎಲ್ಲರೂ ಕರೋಣವನ್ನ್ಸ್ ಓಡಿಸುವದು ಅವಶ್ಯಕತೆ ಇದೆ..ತಮ್ಮ ಆರ್ಟಿಕಲ್ ತುಂಬಾ ಚೆನ್ನಾಗಿದೆ ಸರ್

    ReplyDelete

Post a Comment